ಬಿಜೆಪಿ ಹಿಂದುತ್ವದ ಪಕ್ಷವಲ್ಲ, ಅಧಿಕಾರದ ಗೀಳಿರುವ ಪಕ್ಷ: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಾಗ್ದಾಳಿ | Uddhav Thackeray

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ
Published on
ಮುಂಬೈ: ಕೆಲವೇ ದಿನಗಳಲ್ಲಿ ನಡೆಯಲಿರುವ ಮಹಾರಾಷ್ಟ್ರ ರಾಜಧಾನಿ ಬ್ರಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray) ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಹಿಂದುತ್ವದ ಪಕ್ಷವಲ್ಲ, ಅದು ಅಧಿಕಾರದ ಗೀಳಿರುವ ಪಕ್ಷ ಎಂದು ಕರೆದಿದ್ದಾರೆ.

ಖಾಸಗಿ ಸುದ್ದಿ ಚಾನಲ್​ನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಅಖಂಡ ಮಹಾರಾಷ್ಟ್ರ ಚಳುವಳಿಗೆ ಧುಮುಕಿದವರೇ ನಾವು, ಜನಸಂಘ ಆ ಬಳಿಕ ಸೇರಿಕೊಂಡಿತು. ಬಿಜೆಪಿ ಮಹಾರಾಷ್ಟ್ರದ ರಾಜಕೀಯ ಸಂಸ್ಕೃತಿಯನ್ನು ನಾಶಪಡಿಸುತ್ತಿದೆ. ಬಿಜೆಪಿ ಹಿಂದುತ್ವ ಪಕ್ಷವಲ್ಲ, ಅದು ಅಧಿಕಾರದ ಗೀಳಿನ ಪಕ್ಷ. ಅವರ ಡಿಎನ್ಎದಲ್ಲೇ ಅವಕಾಶವಾದ ಬೇರೂರಿದೆ. ಬಿಜೆಪಿಯವರು ಕೇವಲ ಸಂತರಂತೆ ನಟಿಸುತ್ತಾರೆ ಎಂದಿದ್ದಾರೆ.
ಅಧಿಕಾರದಲ್ಲಿ ಉಳಿಯಲು ಅವರು ಯಾರೊಂದಿಗೂ, ಅದರಲ್ಲೂ ಗೂಂಡಾಗಳೊಂದಿಗೆ ಸಹ - ಮೈತ್ರಿ ಮಾಡಿಕೊಳ್ಳಲು ಹಿಂದೆ-ಮುಂದೆ ನೋಡಲ್ಲ. ಬಿಜೆಪಿ ಸಚಿವರು ಗೋಮಾಂಸ ಸೇವಿಸುತ್ತಾರೆ. ಆದರೆ ಹಿಂದುತ್ವದ ಬಗ್ಗೆ ನಮಗೆ ಉಪನ್ಯಾಸ ನೀಡಲು ಬರುತ್ತಾರೆ. ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಹಿಂದೂ-ಮುಸ್ಲಿಂ ವಿಷಯವಿಲ್ಲ, ಕೇವಲ ಆಡಳಿತದ ಬಗ್ಗೆ ಮಾತ್ರ ವಿಷಯವಾಗಿದೆ ಎಂದು ಹೇಳಿದ್ದಾರೆ.
ಅಕೋಟ್ ಪುರಸಭೆಯಲ್ಲಿನ ಬಿಜೆಪಿ-ಎಐಎಂಐಎಂ ಮೈತ್ರಿಯನ್ನು ಬಿಜೆಪಿಯ ಲವ್ ಜಿಹಾದ್ ಎಂದು ವ್ಯಂಗ್ಯವಾಡಿರುವ, ತನ್ನ ಹಾದಿಯಲ್ಲಿರುವ ಎಲ್ಲರನ್ನೂ ಅವರು ಕಬಳಿಸಲು ಪ್ರಯತ್ನಿಸುತ್ತಾರೆ. ಏಕನಾಥ್ ಶಿಂಧೆ ನೇತೃತ್ವದ ಸೇನಾ ಬಣಕ್ಕೆ ಕರಾಳ ಭವಿಷ್ಯವಿದೆ ಎಂದು ಬಿಜೆಪಿ ಪಕ್ಷದ ವಿಸ್ತರಣಾ ಮನೋಭಾವನೆಯನ್ನು ಟೀಕಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net